ತಾಮ್ರಪ್ರಾಚೀನ ಮಾನವರಿಗೆ ತಿಳಿದಿದ್ದ ಕೆಲವೇ ಲೋಹಗಳಲ್ಲಿ ಒಂದು. ಇದು ಮೂಲಧಾತುಗಳಲ್ಲಿ ಪ್ರಮುಖವಾದುದು. ಪ್ರಾಚೀನ ಕಾಲದಲ್ಲಿ ಇದು ಮೆಡಿಟರೇನಿಯನ್ಸಮುದ್ರದ ದ್ವೀಪವಾದ ಸೈಪ್ರಸ್ನಲ್ಲಿ ಪ್ರಮುಖವಾಗಿ ದೊರೆಯುತ್ತಿದ್ದುದರಿಂದ ಇದಕ್ಕೆ ಸಿಪ್ರಿಯನ್ ಲೋಹ ಎಂದು ಹೆಸರಿತ್ತು. ಇದರ ರಾಸಾಯನಿಕ ಸಂಕೇತ ವಾದ "Cu" ಹಾಗೂ ಹೆಸರು "ಕಾಪರ್" ಸಿಪ್ರಿಯನ್ ಲೋಹದ ರೋಮನ್ ರೂಪವಾಗಿದೆ. ಇದು ಬಹಳ ಉಪಯುಕ್ತ ಲೋಹವಾಗಿದ್ದು ವ್ಯಾಪಕವಾಗಿ ಬಳಕೆಯಲ್ಲಿದೆ. ಇದು ಅತ್ಯುತ್ತಮ ವಾಹಕವಾಗಿರುವುದರಿಂದ ಪ್ರಪಂಚದಲ್ಲಿ ಉತ್ಪಾದನೆಯಾಗುವ ಸುಮಾರು ೬೦ ಶೇಕಡಾ ವಿದ್ಯುತ್ ತಂತಿಯಾಗಿ ಬಳಕೆಯಲ್ಲಿದೆ. ಬೇರೆ ಲೋಹಗಳೊಂದಿಗೆ ಸುಲಭವಾಗಿ ಬೆರೆಯುವುದರಿಂದ ಹಿತ್ತಾಳೆ, ಕಂಚುಮುಂತಾದ ಉಪಯುಕ್ತ ಮಿಶ್ರ ಲೋಹಗಳ ತಯಾರಿಕೆಯಲ್ಲಿ ಪ್ರಮುಖ ಲೋಹವಾಗಿದೆ.