ದಕ್ಷಿಣ ಅಮೇರಿಕ - ಪೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ, ಮತ್ತು ಅಟ್ಲಾಂಟಿಕ್ ಸಾಗರದ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಖಂಡ. ಇದರ ಉತ್ತರ ಭಾಗಕ್ಕೆ ಉತ್ತರ ಅಮೇರಿಕ ಖಂಡ ಮತ್ತು ಕೆರಿಬ್ಬಿಯನ್ ಸಮುದ್ರವು ಇವೆ.
ಅಮೆರಿಗೊ ವೆಸ್ಪುಚಿ ಎಂಬ ಯೂರೋಪಿಯನ್ ನಾವಿಕ ಮೊದಲ ಬಾರಿಗೆ ಅಮೆರಿಕ ಖಂಡಗಳು "ಪೂರ್ವ ಇಂಡೀಸ್" ಅಲ್ಲ, ಒಂದು ವಿಶಿಷ್ಟ ಖಂಡ ಎಂದು ತಿಳಿಸಿಕೊಟ್ಟನು. ಈ ಕಾರಣದಿಂದ ಈ ಖಂಡಗಳನ್ನು ಇವನ ಹೆಸರನ್ನು ಆಧರಿಸಿ "ಅಮೆರಿಕ" ಎಂದು ಕರೆಯಲಾಗಿದೆ.
ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣ ೧,೭೮,೪೦,೦೦೦ ಚದರ ಕಿ.ಮಿ. ಅಥವಾ ಭೂಮಿಯ ಶೇಕಡಾ ೩.೫% ರಷ್ಟು. ೨೦೦೫ರಲ್ಲಿ ಇದರ ಜನಸಂಖ್ಯೆ ಸುಮಾರು ೩೭,೧೦,೦೦,೦೦೦. ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣವು ಏಷ್ಯಾ, ಆಫ್ರಿಕಾ, ಮತ್ತು ಉತ್ತರ ಅಮೆರಿಕ ಖಂಡಗಳ ನಂತರ ನಾಲ್ಕನೇ ಅತಿದೊಡ್ಡದಾಗಿದೆ. ಜನಸಂಖ್ಯೆ ದೃಷ್ಟಿಯಿಂದ ಇದಕ್ಕೆ ಐದನೆಯ ಸ್ಥಾನವಿದೆ.
ದಕ್ಷಿಣ ಅಮೆರಿಕಾದಲ್ಲಿ ಭೂಗೋಳದಲ್ಲೇ ಅತಿ ಎತ್ತರದ ಜಲಪಾತ (ಏಂಜೆಲ್ ಜಲಪಾತ), ನೀರಿನ ಪರಿಮಾಣದ ದೃಷ್ಟಿಯಿಂದ ಅತಿ ದೊಡ್ಡ ನದಿ (ಅಮೆಜಾನ್ ನದಿ), ಅತಿ ಉದ್ದದ ಪರ್ವತ ಶ್ರೇಣಿ (ಆಂಡೀಸ್ ಶ್ರೇಣಿ), ಅತಿ ಹೆಚ್ಚು ಆರ್ದ್ರವಾಗಿರುವ ಮರುಭೂಮಿ (ಅಟಕಾಮ), ಅತಿ ದೊಡ್ಡ ದಟ್ಟ ಕಾಡು (ಅಮೆಜಾನ್ ಕಾಡು), ಅತಿ ಎತ್ತರದ ರಾಜಧಾನಿ (ಲಾ ಪಾಜ್, ಬೊಲಿವಿಯಾದ ರಾಜಧಾನಿ), ವಾಣಿಜ್ಯ ಹಡಗುಗಳನ್ನು ಸಾಗಿಸಬಹುದಾದಂಥ ಅತಿ ಎತ್ತರದ ಸರೋವರ (ಟಿಟಿಕಾಕಾ ಸರೋವರ), ಮತ್ತು ಭೂಮಿಯಲ್ಲೇ ಅತಿ ದಕ್ಷಿಣದಲ್ಲಿರುವ ನಗರ (ಪ್ಯೂರ್ತೋ ತೋರೋ, ಚಿಲಿ ದೇಶದ ನಗರ), ಇವುಗಳು ಕಂಡುಬರುತ್ತವೆ.
ರಾಷ್ಟ್ರಗಳು ಮತ್ತು ಪ್ರಾಂತ್ಯಗಳು
ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ.
↑ Some of the islands of the Netherlands Antilles are South American, others are located much further to the North. It is generally considered a transcontinental country in the Caribbean (UN region) and South America; population and area figures are for South American portion only.
↑Panama is generally considered a transcontinental country in Central America (UN region) and South America; population and area figures are for South American portion only, east of the Panama Canal.