|
Article on other languages:
|
ದಿವಿಹಲಸು(ಸೀಮೆಹಲಸು)ಇದು ಮಲಯ ದ್ವೀಪ ಸಮೂಹಗಳ ಮೂಲ ನಿವಾಸಿ.ಎಲ್ಲಾ ಉಷ್ಣವಲಯ ಪ್ರದೇಶಗಳಲ್ಲಿ ಈಗ ಬೆಳಸಲ್ಪಟ್ಟಿದೆ.೧೮ನೇ ಶತಮಾನದಲ್ಲಿ ಲೆಫ್ಟಿನೆಂಟ್ ವಿಲಿಯಮ್ ಬ್ಲೀಗ್ ಎಂಬವನು ಇದನ್ನು ಎಲ್ಲಾ ಪ್ರದೇಶಗಳಲ್ಲಿ ಪರಿಚಯಿಸಿದನು.ಕರ್ನಾಟಕದಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಮನೆ ಹಿತ್ತಿಲುಗಳಲ್ಲಿ ಬೆಳೆಸುತ್ತಾರೆ.
ಸಸ್ಯಶಾಸ್ತ್ರೀಯ ವರ್ಗೀಕರಣಇದು ಮೊರಸಿ ಕುಟುಂಬಕ್ಕೆ ಸೇರಿದ್ದು,ಆರ್ಟೋಕಾರ್ಪಸ್ ಇನ್ಸಿಸ (Artocarpus incisa)(Artocarpus altilis)ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ. ಆಂಗ್ಲ ಭಾಷೆಯಲ್ಲಿ Bread Fruit ಎಂದು ಕರೆಯುತ್ತಾರೆ.ತುಳು ಬಾಷೆಯಲ್ಲಿ 'ಜೀಗುಜ್ಜೆ'ಎಂದು ಹೆಸರು. ಸಸ್ಯದ ಗುಣಲಕ್ಷಣಗಳುಅಂದವಾದ ಹರಡಿದ ಹಂದರದ ನಿತ್ಯಹರಿದ್ವರ್ಣದ ಮರ.ದೊಡ್ಡ ಪ್ರಮಾಣಕ್ಕೆ ಬೆಳೆಯುವುದು.ಮರ ಹಾಗೂ ಎಲೆ ತೊಟ್ಟಿನಲ್ಲಿ ಒಂದು ರೀತಿಯ ರಬ್ಬರಿನಂತಹ ಬಿಳಿಯ ಅಂಟು ದ್ರವ ಬರುವುದು.ವರ್ಷಕ್ಕೆ ಒಂದು ಮರ ೧೦೦-೨೦೦ ರಷ್ಟು ಕಾಯಿಗಳನ್ನು ಬಿಡುವುದು. ಉಪಯೋಗಗಳುಇದರ ಕಾಯಿ ತರಕಾರಿಯಾಗಿ ಉಪಯೋಗಿಸಲ್ಪಡುವುದು.ಇದರಲ್ಲಿ ಹಲವಾರು ಬಗೆಯ ಖಾದ್ಯಗಳನ್ನು ಮಾಡುತ್ತಾರೆ. == ಆಧಾರ == ೧.ವನಸಿರಿ:ಅಜ್ಜಂಪುರ ಕೃಷ್ಣಮೂರ್ತಿ External links
|
This article is from Wikipedia. All text is available under the terms of the GNU Free Documentation License.