|
Article on other languages: |
ಹಾಲವಾಣ(Erythrina variegata)ಪರ್ಣಪಾತಿ ಮರ.ಉಷ್ಣವಲಯದಲ್ಲಿ ಬೆಳೆಯುವ ಮರ ಜಾತಿ.ಆಫ್ರಿಕ,ಏಷ್ಯಾ,ಆಸ್ಟ್ರೇಲಿಯ ಖಂಡಗಳಲ್ಲದೆ,ಹಿಂದೂ ಮಹಾಸಾಗರದ ಹಲವಾರು ದ್ವೀಪಸಮೂಹಗಳಲ್ಲಿ ಕಂಡುಬರುತ್ತದೆ.
ಸಸ್ಯಶಾಸ್ತ್ರೀಯ ವರ್ಗೀಕರಣಇದು ಫಬಾಸಿ (Fabaceae)ಕುಟುಂಬಕ್ಕೆ ಸೇರಿದ್ದು,ಎರಿತ್ರಿನ ವೆರಿಗಟ (Erythrina Variegata),ಎರಿತ್ರಿನ ಇಂಡಿಕ ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ. ಸಸ್ಯದ ಗುಣಲಕ್ಷಣಗಳುಪರ್ಣಪಾತಿ ಮರ.ಹವಳಗೆಂಪು ಬಣ್ಣದ ಅಂದವಾದ ಹೂಗಳು.(ಚಿತ್ರ ನೋಡಿ).ಎಳೆಯ ಕೊಂಬೆಗಳು ಮುಳ್ಳಿನಿಂದ ಕೂಡಿವೆ.ದಾರುವು ಹಗುರವಾಗಿದ್ದು ಬಿಳಿ ಬಣ್ಣದ್ದಾಗಿರುತ್ತದೆ. ಉಪಯೋಗಗಳುಇದರ ದಾರುವು ಹಗುರವಾಗಿದ್ದು,ಬಿಳಿ ಬಣ್ಣದ್ದಾಗಿರುವುದರಿಂದ ಮಕ್ಕಳ ಆಟದ ಸಾಮಾನು,ಮುಖವಾಡ,ಡೋಲು ಮುಂತಾದ ವಸ್ತುಗಳನ್ನು ಮಾಡಲು ಉಪಯೋಗಿಸುತ್ತಾರೆ.ಅರಗಿನ ಮೆರಗುಕೊಟ್ಟು ಮಾಡುವ ಸಾಮಾನುಗಳನ್ನು ತಯಾರಿಸಲು ಬಳಸುತ್ತಾರೆ.ಬೆಂಕಿ ಕಡ್ಡಿ ಮಾಡಲು ಉಪಯೋಗಿಸಲ್ಪಡುತ್ತದೆ. ಆಧಾರ ಗ್ರಂಥಗಳು೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ |
This article is from Wikipedia. All text is available under the terms of the GNU Free Documentation License.